Forum Super Search
 ♦ 
×
HashTag:
Member:
Posting Date From:
Posting Date To:
Train Type:
Train:
Station:
ONLY with Pic/Vid:
Sort by: Date:     Word Count:     Popularity:     
Public:    Pvt: Monitor:    RailFan Club:    

Search
  Go  
Full Site Search
  Search  
 
Mon Oct 23, 2017 18:49:34 ISTHomeTrainsΣChainsAtlasPNRForumGalleryNewsFAQTripsLoginFeedback
Mon Oct 23, 2017 18:49:34 IST

Blog Entry# 2357655
Posted: Jul 20 2017 (11:21)

4 Responses
Last Response: Jul 21 2017 (16:59)
  
Rail News
0 Followers
1745 views
Other NewsSWR/South Western  -  
Jul 20 2017 (08:42)   ಜೋಡಿ ಹಳಿ ನಿರ್ಮಾಣವೇ ಪರಿಹಾರ

knkprasad956*^~   535 news posts
Entry# 2357655   News Entry# 308956         Tags   Past Edits
ಬೆಂಗಳೂರು: ಯಶವಂತಪುರ– ಹೊಸೂರು ರೈಲು ಪದೇ ಪದೇ ವಿಳಂಬವಾಗುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದ್ದರೆ ಈ ಮಾರ್ಗದಲ್ಲಿ ಆದಷ್ಟು ಶೀಘ್ರ ಜೋಡಿ ಹಳಿ ನಿರ್ಮಿಸಬೇಕು. ಈ ಮಾರ್ಗವನ್ನು ವಿದ್ಯುದೀಕರಣಗೊಳಿಸಬೇಕು ಎಂದು ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.
ಯಶವಂತಪುರ ಜಂಕ್ಷನ್‌ನಿಂದ ಬೆಳಿಗ್ಗೆ 6.30ಕ್ಕೆ ಹೊರಡುವ ರೈಲು ಹೊಸೂರನ್ನು 8 ಗಂಟೆಗೆ ತಲುಪಬೇಕು. ಈ ರೈಲು ಕೊನೆಯ ನಿಲ್ದಾಣ ತಲುಪುವಾಗ ನಿತ್ಯವೂ ಸುಮಾರು ಒಂದು ಗಂಟೆ ತಡವಾಗುತ್ತಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಒಂದೇ ವಾರದಲ್ಲಿ ಎರಡು ಬಾರಿ ರೈಲನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಸಂಜೆ ಹೊಸೂರಿನಿಂದ ಯಶವಂತಪುರಕ್ಕೆ ಬರುವ ರೈಲು ಕೂಡ ವಿಳಂಬವಾಗುತ್ತಿದೆ ಎಂಬುದು ಪ್ರಯಾಣಿಕರ ದೂರು.
‘ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ ರಸ್ತೆ, ಮಹದೇವಪುರ, ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೈಗಾರಿಕೆಗಳೂ ಸೇರಿದಂತೆ ಅನೇಕ ಕೈಗಾರಿಕೆಗಳಿವೆ. ಯಶವಂತಪುರ, ಪೀಣ್ಯ ಪ್ರದೇಶದಲ್ಲೂ ಅನೇಕ ಕೈಗಾರಿಕೆಗಳಿವೆ. ಇಲ್ಲಿನ ಉದ್ಯೋಗಿಗಳು ಈ ರೈಲನ್ನು ಬಳಸುತ್ತಿದ್ದಾರೆ. ಈ ರೈಲಿನಲ್ಲಿ
...
more...
ನಿತ್ಯ ಸರಾಸರಿ 9,000 ಮಂದಿ ಪ್ರಯಾಣಿಸುತ್ತಾರೆ. ರೈಲು ವಿಳಂಬವಾದರೆ ಅವರೆಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಸುಹಾಸ್ ನಾರಾಯಣಮೂರ್ತಿ.
‘ವಿಳಂಬಕ್ಕೆ ಪ್ರಮುಖ ಕಾರಣ ರೈಲುಗಳ ಕ್ರಾಸಿಂಗ್‌. ಬೆಳಿಗ್ಗೆ ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿಗೆ ದಾರಿ ಬಿಟ್ಟುಕೊಡುವ ಕಾರಣಕ್ಕೆ ಯಶವಂತಪುರ– ಹೊಸೂರು ರೈಲು ವಿಳಂಬವಾಗುತ್ತದೆ. ಈ ರೈಲು ಸಂಜೆ ಹೊಸೂರಿನಿಂದ ಯಶವಂತಪುರಕ್ಕೆ ಸಂಚರಿಸುವಾಗ ನಾಗರಕೋಯಿಲ್‌ ಎಕ್ಸ್‌ಪ್ರೆಸ್‌ಗೆ ದಾರಿ ಬಿಟ್ಟು ಕೊಡಬೇಕಾಗುತ್ತದೆ. ಆ ರೈಲು ಕಾರೈಕಲ್‌ ಎಕ್ಸ್‌ಪ್ರೆಸ್‌ ಹಾದುಹೋಗುವವರೆಗೂ ಕಾಯಬೇಕು. ರೈಲುಗಳ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಪ್ರಯಾಣಿಕರಿಗೆ ಆಗುವ ಅನನುಕೂಲವನ್ನು ತಪ್ಪಿಸಬಹುದು’ ಎನ್ನುತ್ತಾರೆ ಅವರು.
‘ಸಬ್‌ಅರ್ಬನ್‌ ರೈಲು ವ್ಯವಸ್ಥೆ ಇರುವ ಮಹಾನಗರಗಳಲ್ಲಿ ಕ್ರಾಸಿಂಗ್‌ ವೇಳೆ ಎಕ್ಸ್‌ಪ್ರೆಸ್‌ ರೈಲುಗಳಿಗಿಂತ ಸ್ಥಳೀಯ ರೈಲುಗಳಿಗೆ ಆದ್ಯತೆ ನೀಡಲಾಗುತ್ತದೆ. ರೈಲ್ವೆ ಮಂಡಳಿಯ ನಿಯಮಗಳೂ ಇದನ್ನೇ ಹೇಳುತ್ತವೆ. ನಿತ್ಯ ಕಚೇರಿಗೆ ಹೋಗಲು ರೈಲು ಬಳಸುವವರಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈ ನಿಯಮ ರೂಪಿಸಲಾಗಿದೆ. ಆದರೆ, ನಮ್ಮಲ್ಲಿ ಸ್ಥಳೀಯ ರೈಲನ್ನು ನಿಲ್ಲಿಸಿ ಹೊರಗಿನಿಂದ ಬರುವ ಎಕ್ಸ್‌ಪ್ರೆಸ್‌ ರೈಲುಗಳು ಹಾದುಹೋಗುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇದು ನಿಜಕ್ಕೂ ದುರದೃಷ್ಟಕರ ಎನ್ನುತ್ತಾರೆ’ ಪ್ರಜಾರಾಗ್‌ ಸಂಘಟನೆಯ ಸಂಜೀವ ದ್ಯಾಮಣ್ಣವರ್‌.
‘ಸಿಗ್ನಲಿಂಗ್‌ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ, ಸ್ವಯಂಚಾಲಿತ ಸಿಗ್ನಲಿಂಗ್‌ ವ್ಯವಸ್ಥೆ ಅಳವಡಿಸುವ ಮೂಲಕವೂ ವಿಳಂಬ ತಪ್ಪಿಸಬಹುದು’ ಎಂದು ಅವರು ಸಲಹೆ ನೀಡುತ್ತಾರೆ.
‘ಸಬ್‌ಅರ್ಬನ್‌ ರೈಲು ಜಾಲವನ್ನು ಅಭಿವೃದ್ಧಿಪಡಿಸುವುದಾದರೆ ಈ ಮಾರ್ಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದನ್ನು ಅಭಿವೃದ್ಧಿಪಡಿಸುವುದರಿಂದ ನಗರದ ಒಳಗಿನ ಸಂಚಾರ ದಟ್ಟಣೆಯ ಮೇಲಿನ ಹೊರೆ ಬಹಳಷ್ಟು ತಗ್ಗಲಿದೆ’ ಎನ್ನುತ್ತಾರೆ ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕ ಟಿ.ಪಿ.ಲೋಕೇಶ್‌.
‘ಯಶವಂತಪುರ– ಸೇಲಂ ಮಾರ್ಗದಲ್ಲೇ ಹೊಸೂರು ಕೂಡಾ ಬರುತ್ತದೆ. ಈ ಮಾರ್ಗದಲ್ಲಿ ಜೋಡಿಹಳಿ ನಿರ್ಮಿಸುವ ಪ್ರಸ್ತಾವ ರೈಲ್ವೆ ಇಲಾಖೆ ಮುಂದಿದೆ. ಆದರೆ, ಅದಕ್ಕಿನ್ನೂ ಮಂಜೂರಾತಿ ಸಿಕ್ಕಿಲ್ಲ. ಜೋಡಿ ಮಾರ್ಗ ನಿರ್ಮಾಣವಾದರೆ ಈ ಮಾರ್ಗದ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಈ ಮಾರ್ಗ 10 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಇತ್ತೀಚೆಗೆ ನಗರದಲ್ಲಿ ರೈಲುಗಳ ದಟ್ಟಣೆ ಹೆಚ್ಚಿದೆ. ಹಾಗಾಗಿ ಕ್ರಾಸಿಂಗ್‌ ಸಮಸ್ಯೆ ಉಂಟಾಗುವುದು ಸಹಜ. ಆದರೂ ನಮ್ಮ ಇತಿಮಿತಿಯೊಳಗೆ ಸಮಸ್ಯೆ ಬಗೆಹರಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ’ ಎಂದರು.
‘ರೈಲು ನಿಲ್ಲಿಸುವ ಸ್ಥಳ ಬದಲಾಗಲಿ’
‘ಬೈಯಪ್ಪನಹಳ್ಳಿ ನಿಲ್ದಾಣದಿಂದ ಬೆಳ್ಳಂದೂರು ಕಡೆಗೆ ಹೋಗುವ ಮಾರ್ಗದ ತಿರುವಿನಲ್ಲಿ ರೈಲನ್ನು ನಿಲ್ಲಿಸಲಾಗುತ್ತಿದೆ. ಇಲ್ಲಿ ರೈಲನ್ನು ಈಗ ನಿಲ್ಲಿಸುತ್ತಿರುವ ಜಾಗಕ್ಕಿಂತ 300 ಮೀಟರ್‌ನಷ್ಟು ಮುಂದಕ್ಕೆ (ಬೈಯಪ್ಪನಹಳ್ಳಿ ನಿಲ್ದಾಣದ ಕಡೆಗೆ) ನಿಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಈ ರೈಲಿನ ಬೋಗಿಗಳು ಬೆಳ್ಳಂದೂರು ಕಡೆಯ ಟ್ರ್ಯಾಕ್‌ನಲ್ಲಿ ಉಳಿಯುವುದನ್ನು ತಡೆಯಬಹುದು. ಆಗ ಬೆಳ್ಳಂದೂರು– ಬಾಣಸವಾಡಿ ಮಾರ್ಗ ಇತರ ರೈಲುಗಳ ಸಂಚಾರಕ್ಕೆ ಮುಕ್ತವಾಗುತ್ತದೆ’ ಎಂದು ಸುಹಾಸ್‌ ಸಲಹೆ ನೀಡಿದರು.
ಸಬ್‌ಅರ್ಬನ್‌ಗೆ ಪ್ರತ್ಯೇಕ ಹಳಿ ಇರಲಿ
‘ಮುಂಬೈನಲ್ಲಿ ಸಬ್ಅರ್ಬನ್‌ ರೈಲುಗಳಿಗೆ ಆರು ಪ್ರತ್ಯೇಕ ಮಾರ್ಗಗಳಿವೆ. ಚೆನ್ನೈನಲ್ಲಿ ನಾಲ್ಕು ಪ್ರತ್ಯೇಕ ಮಾರ್ಗಗಳಿವೆ. ಹಾಗಾಗಿ ಅಲ್ಲಿ ದೂರ ಪ್ರಯಾಣದ ರೈಲುಗಳಿಂದ ಸಬ್ಅರ್ಬನ್‌ ರೈಲುಗಳಿಗೆ ಅಡ್ಡಿ ಉಂಟಾಗುವುದಿಲ್ಲ. ನಮ್ಮಲ್ಲೂ ಸಬ್‌ಅರ್ಬನ್‌ ರೈಲುಗಳಿಗೆ ಪ್ರತ್ಯೇಕ ಹಳಿ ನಿರ್ಮಿಸಬೇಕು’ ಎಂದು ಒತ್ತಾಯಿಸುತ್ತಾರೆ ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್‌.

  
1706 views
Jul 20 2017 (11:21)
New TT what is there for KA swr~   4442 blog posts   329 correct pred (69% accurate)
Re# 2357655-1            Tags   Past Edits
Your views are there krishna sir. Good to compare with Mumbai/Chennai for suburban train and develop rapidly

  
1481 views
Jul 20 2017 (14:30)
knkprasad956*^~   2294 blog posts
Re# 2357655-2            Tags   Past Edits
Thank you

  
1371 views
Jul 20 2017 (19:43)
Please Invite EVERYONE for the next IRI Convention   667 blog posts
Re# 2357655-3            Tags   Past Edits
ಈ ರೈಲಿನಲ್ಲಿ ನಿತ್ಯ ಸರಾಸರಿ 9,000 ಮಂದಿ ಪ್ರಯಾಣಿಸುತ್ತಾರೆ. - 9000 people travel by 06591? Isn't it a DEMU. And that DEMU has capability to carry 9000 people?

  
1975 views
Jul 21 2017 (16:59)
Vinay Bharadwaj*^~   4793 blog posts   953 correct pred (74% accurate)
Re# 2357655-4            Tags   Past Edits
He he...

ARP (Advanced Reservation Period) Calculator

Reservations Open Today @ 8am for:
Trains with ARP 10 Dep on: Thu Nov 2
Trains with ARP 15 Dep on: Tue Nov 7
Trains with ARP 30 Dep on: Wed Nov 22
Trains with ARP 120 Dep on: Tue Feb 20

  
  

Rail News

New Trains

Site Announcements

  • Entry# 2547009
    Oct 16 (10:21PM)


    As per the recent post , the new Pax Login feature has now been introduced. Here are the details of the feature set. . 1. Now you may login to the site as a Member or a Passenger, or BOTH Member & Passenger at the same time. Passenger login is called "Pax Login"...
  • Entry# 2517609
    Oct 11 (09:33AM)


    As detailed here , last month, some changes were made to the PNR section. In the next phase of this rollout, we shall be further separating "Passengers" from "Members". . 1. "Passengers" will be able to login using ONLY their PNRs (no password). We shall have a Pax Login above the current...
  • Entry# 2418661
    Sep 25 (07:09AM)


    @all: There are some changes coming to the PNR Forum. 1. All PNRs will be anonymized, i.e. you won't see who posted the PNRs or search PNRs by Traveller. This is to better protect the confidentiality of travelling members and their travel plans. However, members will still be able to search their OWN...
  • Entry# 2409730
    Sep 15 2017 (11:46PM)


    In recent times, the number of FM Complaints regarding "targeting me", "offensive content", "sarcastic comment", "bashing", etc. have been increasing. This has led to increased censorship and throttling of open discussions. . This is a clarification that this site is meant for a FREE EXCHANGE of ideas. Some arguments/debates/disagreements/jokes/sarcasm are ALLOWED and are...
  • Entry# 2390218
    Aug 25 2017 (12:59PM)


    There has been a partial rollout of a modification to Timeline entries. The implementation will be complete within a week. 1. Void & RAC buttons have been removed. . 2. TL Entries can now be Edited and Fixed by the original updater, if there are errors. So there is no need to Void TLs...
  • Entry# 2175399
    Feb 23 2017 (01:22PM)


    There has recently been a lot of frustration among RFs when their Station Pics, Loco Pics, Train Pics get rejected because the "number is not showing", "shed is not visible", the loco/train is at a distance, Train Board is too small, "better pic available", etc. . To address this issue, effective tomorrow, ALL...
Scroll to Top
Scroll to Bottom


Go to Mobile site
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.